ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥಕ್ಕೆ ಡಾ.ಕಿರಣ ಪಾಟೀಲ್ ಚಾಲನೆ:
-------
ಕ್ಯಾನ್ಸರ್ ಲಕ್ಷಣ ಕಂಡುಬಂದಲ್ಲಿ ಸಮೀಪದ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ
=====================
ಬೀದರ, ಫೆಬ್ರವರಿ.06 (ಕರ್ನಾಟಕ ವಾರ್ತೆ):- ಪ್ರತಿ ವರ್ಷ ಭಾರತದಾದ್ಯಂತ 14-15 ಲಕ್ಷ ಕ್ಯಾನ್ಸರ್‍ನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು 8-9 ಲಕ್ಷ ಸಾವುಗಳು ಸಂಭವಿಸುತ್ತಿವೆ.ಆದ್ದಂರಿಂದ ಯಾವುದೆ ತರಹದ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಲ್ಲಿ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕೆಂದು ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್ ತಿಳಿಸಿದರು.
ಅವರು ಶುಕ್ರವಾರ ವಿಶ್ವ ಕ್ಯಾನ್ಸರ್ ದಿನಾಚರಣೆ 2026ರ ಪ್ರಯುಕ್ತ ಜಿಲ್ಲಾ ಎನ್.ಸಿ.ಡಿ. ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ಜನರಲ್ಲಿ ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥವನ್ನು ಉದ್ಘಾಟಿಸಿ ಹಸಿರು ಧ್ವಜ ತೋರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವರ್ಷವು ಕ್ಯಾನ್ಸರ್ ದಿನಾಚರಣೆಯನ್ನು ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದ ಘೋಷವಾಕ್ಯ ”ವಿಶಿಷ್ಟತೆಯಿಂದ ಏಕತೆ” ಆಗಿದೆ. ಜನರಲ್ಲಿ ಕ್ಯಾನ್ಸರ್ ಕುರಿತ ರೋಗ ಕಾರಣಗಳು, ಲಕ್ಷಣಗಳು, ತಪಾಸಣೆ ಹಾಗೂ ಆರೈಕೆ ಕುರಿತ ಅರಿವು ಬಹುಮುಖ್ಯವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪಾ ಬೊಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಗಳ ಪ್ರಮಾಣವು ಜಗತ್ತಿನಾದ್ಯಾಂತ ಅತಿ ತೀವ್ರವಾಗಿ ಹೆಚ್ಚುತ್ತಿದೆ, ಆದ್ದÀರಿಂದ ಜನರಲ್ಲಿ ಭಯದ ಬದಲು ರೋಗದ ಅರಿವು ತುಂಬಾ ಮುಖ್ಯವಾಗಿದ್ದು, ಇದಕ್ಕೆ ಪ್ರಮುಖವಾಗಿ ತಂಬಾಕು ಪದಾರ್ಥಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮಧ್ಯಪಾನ ಸೇವನೆ ಆದಿ ಮುಖ್ಯ ಕಾರಣಗಳಾಗಿದ್ದು. ಪುರುಷರಲ್ಲಿ ಪ್ರಮುಖವಾಗಿ ಬಾಯಿ, ಗಂಟಲು, ಶ್ವಾಸಕೋಶ, ಜಠರ ಮತ್ತು ಅನ್ನನಾಳದ ಕ್ಯಾನ್ಸರಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ಥನ ಮತ್ತು ಗರ್ಭಕಂಠವು ಕ್ಯಾನ್ಸರನ ಪ್ರಮುಖ ತಾಣಗಳಾಗಿವೆ. ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಜೊತೆಗೆ 30 ವರ್ಷ ಮೇಲ್ಪಟ್ಟವರು ಪ್ರತಿ 5 ವರ್ಷಕ್ಕೊಮ್ಮೆ ಪುರುಷರು ಬಾಯಿಕ್ಯಾನ್ಸರ್ ಹಾಗೂ ಮಹಿಳೆಯು ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್‍ಗಳ ಪೂರ್ವಭಾವಿ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕು, ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದೆಂದು ತಿಳಿಸಿದರು. ..... ..... .......

Sponsored / Featured Ads
Contact for ADS
8748888103/100
Sponsored by People of Universe