UNVIERSAL News PLATFORM
Search • Browse • Read • Engage • FREE NEWS/Dating/Properties/Post/Info/ADs/Buy/Sell/Jobs etc.,

!! खास खबर / ब्रेकिंग न्यूज़ !!

* Shatranj Rating www.Shatranj.Top is doing great job for Chess Players by providing Rating, Gifts & JOB Guarantee Opportunities

* AI महाकुंभ.. मोदी देंगे दुनिया को डिजिटल मंत्र! दिल्ली ।

* पीएम बनते ही तारिक ने भारत के दुश्मन को लगाया ठिकाने!Tarique Rahman Big Action Yunus| Bangladesh

*www.KhabarOnline.Top is making wonders in NEWS Industry.


आज :1095740 - 55 - परिणाम दिवस

ADvertise HERE

← पिछे जाने के लिए

खबर / पोस्ट / जानकारी / विज्ञापन
दिनांक : 📅 1095740 - 26 - मनोरंजन दिवस |

| 2026-02-06 | 👁️ 2090 |

ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥಕ್ಕೆ ಡಾ.ಕಿರಣ ಪಾಟೀಲ್ ಚಾಲನೆ:
-------
ಕ್ಯಾನ್ಸರ್ ಲಕ್ಷಣ ಕಂಡುಬಂದಲ್ಲಿ ಸಮೀಪದ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ
=====================
ಬೀದರ, ಫೆಬ್ರವರಿ.06 (ಕರ್ನಾಟಕ ವಾರ್ತೆ):- ಪ್ರತಿ ವರ್ಷ ಭಾರತದಾದ್ಯಂತ 14-15 ಲಕ್ಷ ಕ್ಯಾನ್ಸರ್‍ನ ಹೊಸ ಪ್ರಕರಣಗಳು ವರದಿಯಾಗುತ್ತಿದ್ದು 8-9 ಲಕ್ಷ ಸಾವುಗಳು ಸಂಭವಿಸುತ್ತಿವೆ.ಆದ್ದಂರಿಂದ ಯಾವುದೆ ತರಹದ ಕ್ಯಾನ್ಸರ್ ಲಕ್ಷಣಗಳು ಕಂಡುಬಂದಲ್ಲಿ ಜನರು ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕೆಂದು ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಿರಣ್ ಪಾಟೀಲ್ ತಿಳಿಸಿದರು.
ಅವರು ಶುಕ್ರವಾರ ವಿಶ್ವ ಕ್ಯಾನ್ಸರ್ ದಿನಾಚರಣೆ 2026ರ ಪ್ರಯುಕ್ತ ಜಿಲ್ಲಾ ಎನ್.ಸಿ.ಡಿ. ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೀದರ ವತಿಯಿಂದ ಜನರಲ್ಲಿ ಕ್ಯಾನ್ಸರ ಕುರಿತು ಅರಿವು ಮೂಡಿಸುವ ಬೃಹತ್ ಜಾಥವನ್ನು ಉದ್ಘಾಟಿಸಿ ಹಸಿರು ಧ್ವಜ ತೋರಿಸುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವರ್ಷವು ಕ್ಯಾನ್ಸರ್ ದಿನಾಚರಣೆಯನ್ನು ಜನರಲ್ಲಿ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದ ಘೋಷವಾಕ್ಯ ”ವಿಶಿಷ್ಟತೆಯಿಂದ ಏಕತೆ” ಆಗಿದೆ. ಜನರಲ್ಲಿ ಕ್ಯಾನ್ಸರ್ ಕುರಿತ ರೋಗ ಕಾರಣಗಳು, ಲಕ್ಷಣಗಳು, ತಪಾಸಣೆ ಹಾಗೂ ಆರೈಕೆ ಕುರಿತ ಅರಿವು ಬಹುಮುಖ್ಯವಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪಾ ಬೊಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಗಳ ಪ್ರಮಾಣವು ಜಗತ್ತಿನಾದ್ಯಾಂತ ಅತಿ ತೀವ್ರವಾಗಿ ಹೆಚ್ಚುತ್ತಿದೆ, ಆದ್ದÀರಿಂದ ಜನರಲ್ಲಿ ಭಯದ ಬದಲು ರೋಗದ ಅರಿವು ತುಂಬಾ ಮುಖ್ಯವಾಗಿದ್ದು, ಇದಕ್ಕೆ ಪ್ರಮುಖವಾಗಿ ತಂಬಾಕು ಪದಾರ್ಥಗಳ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅಧಿಕ ತೂಕ ಮತ್ತು ಮಧ್ಯಪಾನ ಸೇವನೆ ಆದಿ ಮುಖ್ಯ ಕಾರಣಗಳಾಗಿದ್ದು. ಪುರುಷರಲ್ಲಿ ಪ್ರಮುಖವಾಗಿ ಬಾಯಿ, ಗಂಟಲು, ಶ್ವಾಸಕೋಶ, ಜಠರ ಮತ್ತು ಅನ್ನನಾಳದ ಕ್ಯಾನ್ಸರಗಳು ಹಾಗೂ ಮಹಿಳೆಯರಲ್ಲಿ ಅಧಿಕವಾಗಿ ಸ್ಥನ ಮತ್ತು ಗರ್ಭಕಂಠವು ಕ್ಯಾನ್ಸರನ ಪ್ರಮುಖ ತಾಣಗಳಾಗಿವೆ. ಜನರು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಬೇಕು. ಜೊತೆಗೆ 30 ವರ್ಷ ಮೇಲ್ಪಟ್ಟವರು ಪ್ರತಿ 5 ವರ್ಷಕ್ಕೊಮ್ಮೆ ಪುರುಷರು ಬಾಯಿಕ್ಯಾನ್ಸರ್ ಹಾಗೂ ಮಹಿಳೆಯು ಸ್ತನ ಮತ್ತು ಗರ್ಭ ಕಂಠದ ಕ್ಯಾನ್ಸರ್‍ಗಳ ಪೂರ್ವಭಾವಿ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕು, ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಲ್ಲಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಬಹುದೆಂದು ತಿಳಿಸಿದರು.
ನಗರದ ವಿವಿಧ ಮಾರ್ಗವಾಗಿ ಸಂಚರಿಸಿದ ಜಾಥಾ:ಈ ಜಾಗೃತಿ ಅಭಿಯಾನ ಇಂಡಿಯನ್ ಕ್ಯಾನ್ಸರ್ ಸೊಸೈಟಿ (ಕರ್ನಾಟಕ) ಪ್ರಾದೇಶಿಕ ಕಚೇರಿ ಕಲಬುರಗಿ ಹಾಗೂ Tektronix ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಬೀದರನಿಂದ ಪ್ರಾರಂಭವಾಗಿ ಜನವಾಡ ರಸ್ತೆ ಮಾರ್ಗವಾಗಿ ಅಂಬೇಟ್ಕರ್ ವೃತ್ತದ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಮುಕ್ತಾಯಗೊಳಿಸಲಾಯಿತು. ಜಾಥÀದುದ್ದಕ್ಕೂ ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಫಲಕಗಳು, ಘೋಷಣೆಗಳು ಹಾಗೂ ಧ್ವನಿವರ್ಧಕಗಳ ಮೂಲಕ ಜನರಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದಿಲಿಪ್ ಡೊಂಗ್ರೆ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಶಿವಶಂಕರ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ರಾಜಶೇಖರ ಪಾಟಿಲ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಅನಿಲ ಚಿಂತಾಮಣಿ, ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮ ಸಂಯೋಜಕ ಡಾ.ವೀರೇಶ ಬಿರಾದರ, ಪ್ರಾದೇಶಿಕ ಕಾರ್ಯವ್ಯವಸ್ಥಾಪಕರು ಗುರುರಾಜ ಕುಲ್‍ಕರ್ಣಿ, ಎಸ್.ಬಿ ಪಾಟೀಲ್ ದಂತ ವೈದ್ಯಕೀಯ ಸಂಸ್ಥೆಯ ಪ್ರಾಧ್ಯಾಪಕ ಡಾ. ಸಿದ್ದನ ಗೌಡ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಸಿದ್ದಾರಾಮೇಶ್ವರ ಆಯುರ್ವೇದಿಕ್ ವೈದ್ಯಾಕೀಯ ಕಾಲೇಜಿನ ಪ್ರಾಧ್ಯಾಪಕರು ಡಾ.ಮಹೇಶ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಸರಕಾರಿ ನರ್ಸಿಂಗ್ ಕಾಲೇಜ್ ಬ್ರಿಮ್ಸ್ ಬೀದರನ ಪ್ರಾಧ್ಯಾಪಕರು ಗುರುನಾಥ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ವಸಂತ ನರ್ಸಿಂಗ್ ಕಾಲೇಜ್ ನೌಬಾದನ ಪ್ರಾಧ್ಯಾಪಕರು ಬಾಲಾಜಿ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿದಂತೆ ಜಿಲ್ಲಾ ಎಫ್.ಎಲ್.ಸಿ. ಪ್ರವೀಣ, ಜಿಲ್ಲಾ ಸರ್ವೇಕ್ಷಣಾ ಘಟಕದ ಸಿಬ್ಬಂದಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಿಬ್ಬಂದಿ ವರ್ಗದವರು ಈ ಜಾಥÀದಲ್ಲಿ ಪಾಲ್ಗೊಂಡಿದ್ದರು. ಕಾಂiÀರ್iಕ್ರಮವನ್ನು ಸಂಗಮೇಶ ಕಾಂಬ್ಳೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಸಂಚಾಲಿಸಿದರು.
*****


ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೀದರ
office: 08482-225370
PÀ£ÁðlPÀ ªÁvÉð

खबर कि अन्य लिंक :




  

टिप्पणी (0)

Sponsored / Featured Ads

Contact for ADS
8748888103/100
Sponsored by People of Universe