खबर / पोस्ट / जानकारी / विज्ञापन
दिनांक : 📅 1095740 - 62 - लक्ष्य दिवस |
| 2026-03-14 |
👁️ 1322 |
ಚಿತ್ರ
ಬೀದರ್‍ನ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು
ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಮಹಿಳಾ ದಿನಾಚರಣೆ
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ
ಬೀದರ್: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಉದ್ಯಮಿ ನಾಗಮಣಿ ಕೊಳಾರ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಸಂಕಲ್ಪ ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ಪ್ರಭಾರ ಪ್ರಾಚಾರ್ಯ ಜಾಕೀರ್ ಹುಸೇನ್ ಮಾತನಾಡಿ, ಮಹಿಳೆಯರು ಸಮಾಜದ ಬೆನ್ನೆಲುಬು ಆಗಿದ್ದಾರೆ ಎಂದು ಹೇಳಿದರು.
ಇ ಆ್ಯಂಡ್ ಸಿ ವಿಭಾಗದ ಮುಖ್ಯಸ್ಥೆ ಶೈಲಜಾ, ಉಪನ್ಯಾಸಕಿ ನಿಬಂಧಿನಿ, ರಿಜಿಸ್ಟ್ರಾರ್ ಜ್ಯೋತಿ, ವಿದ್ಯಾರ್ಥಿಗಳಾದ ಹನುಮಂತ, ಶಿವಾನಿ ಮಾತನಾಡಿದರು. ಉಪನ್ಯಾಸಕಿ ಅಶ್ವಿನಿ ನಿರೂಪಿಸಿದರು. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಅರುಣ ಮೊಕಾಶಿ ವಂದಿಸಿದರು.
ಪಾಲಿಟೆಕ್ನಿಕ್‍ನ ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
खबर कि अन्य लिंक :