UNVIERSAL News PLATFORM
Search • Browse • Read • Engage • FREE NEWS/Dating/Properties/Post/Info/ADs/Buy/Sell/Jobs etc.,

!! खास खबर / ब्रेकिंग न्यूज़ !!

* Shatranj Rating www.Shatranj.Top is doing great job for Chess Players by providing Rating, Gifts & JOB Guarantee Opportunities

* AI महाकुंभ.. मोदी देंगे दुनिया को डिजिटल मंत्र! दिल्ली ।

* पीएम बनते ही तारिक ने भारत के दुश्मन को लगाया ठिकाने!Tarique Rahman Big Action Yunus| Bangladesh

*www.KhabarOnline.Top is making wonders in NEWS Industry.


आज :1095740 - 55 - परिणाम दिवस

ADvertise HERE

← पिछे जाने के लिए

खबर / पोस्ट / जानकारी / विज्ञापन
दिनांक : 📅 1095740 - 25 - परिणाम दिवस |

| 2026-02-05 | 👁️ 2233 |

ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸಿ-ಅಮೃತರಾವ ಚಿಮಕೋಡೆ
=================
ಬೀದರ, ಫೆಬ್ರವರಿ.05 (ಕರ್ನಾಟಕ ವಾರ್ತೆ):- ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ತಲುಪಿಸುವಲ್ಲಿ ಯಾವುದೇ ವಿಳಂಭವಾಗಬಾರದು. ಪ್ರತಿ ಹಂತದಲ್ಲೂ ಅಧಿಕಾರಿಗಳು ಗಮನಿಸಿ ಅರ್ಹ ಫಲಾನುಭವಿಗಳಿಗೆ ಸಮರ್ಥಕವಾಗಿ ಹಾಗೂ ನಿಗಧಿತ ಸಮಯದಲ್ಲಿ ತಲುಪಿಸಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಸೂಚಿಸಿದರು.
ಅವರು ಗುರುವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಬೀದರ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ 3,44,896 ಗೃಹಲಕ್ಷ್ಮೀ ಫಲಾನುಭವಿಗಳಿದ್ದು, ಮೃತ ಫಲಾನುಭವಿಗಳ ಕುರಿತು ಪ್ರತಿ ತಿಂಗಳು ನಿರಂತರ ಪರಿಷ್ಕøರಣೆ ಮಾಡಬೇಕು. ಅರ್ಹರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮಿಸಬೇಕೆಂದರು.
ಗೃಹಲಕ್ಷ್ಮೀ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ಸ್ವಾಭಿಮಾನದ ಗುರುತಾಗಿದ್ದು, ಕುಟುಂಬದ ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದೆ. ಕರ್ನಾಟಕ ರಾಜ್ಯ ಸರ್ಕಾರವು ಬಿ.ಪಿ.ಎಲ್. ಮತ್ತು ಎ.ಪಿ.ಎಲ್., ಅಂತ್ಯೋದಯ ಕಾರ್ಡನಲ್ಲಿ ನಮೂದಿಸಿರುವಂತೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000 ಗಳ ಸಹಾಯಧನ ನೀಡಲಾಗುತ್ತಿದೆ ಎಂದರು.
ಗೃಹಲಕ್ಷ್ಮೀ ಯೋಜನೆ ಒಟ್ಟು 3,44,896 ಫಲಾನುಭವಿಗಳಿದ್ದು, 1547.49 ಕೋಟಿ ರೂ. ಸೆಪ್ಟೆಂಬರ್.2025 ರವರೆಗೆ ಸಹಾಯಧನ ಡಿ.ಬಿ.ಟಿ. ಮೂಲಕ ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,56,422 ಅರ್ಹ ಫಲಾನುಭವಿಗಳಿದ್ದು, ಡಿಸೆಂಬರ್.2025 ರವರೆಗೆ 462.46 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ 28-01-2026 ರವರೆಗೆ 11.11 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 327.66 ಕೋಟಿ ರೂ. ಸಂದಾಯವಾಗಿರುತ್ತದೆ. ಪ್ರತಿನಿತ್ಯ ಸರಾಸರಿ 1 ಲಕ್ಷ 16 ಸಾವಿರ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆಂದರು.
ಅನ್ನಭಾಗ್ಯ ಯೋಜನೆಯಡಿಯಲ್ಲಿ 1313305 ಫಲಾನುಭವಿಗಳಿದ್ದು, 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ನೀಡಲಾಗುವ 5 ಕೆಜಿ ಅಕ್ಕಿ ಮೊತ್ತವನ್ನು ಡಿಸೆಂಬರ್.2024 ರವರೆಗೆ ಡಿ.ಬಿ.ಟಿ. ಮುಖಾಂತರ ನೇರವಾಗಿ ಫಲಾನುಭವಿಗಳ ಖಾತೆಗೆ 333.28 ಕೋಟಿ ಹಣ ಜಮೆ ಮಾಡಲಾಗಿದೆ. ಜನವರಿ.2025 ರ ಮಾಹೆಯ ಡಿಬಿಟಿ ಮೂಲಕ ವರ್ಗಾವಣೆ ಬಾಕಿ ಇರುತ್ತದೆ. ಫೆಬ್ರುವರಿ.2025 ರ ಮಾಹೆಯಿಂದ ಡಿ.ಬಿ.ಟಿ. ಬದಲಾಗಿ ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗಳಿಗೆ 05 ಕೆ.ಜಿ. ಹೆಚ್ಚುವರಿ ಅಕ್ಕಿ ಸೇರಿಸಿ ಒಟ್ಟು 10 ಕೆ.ಜಿ. ಅಕ್ಕಿ ಜೂನ್.2025 ರವರೆಗೆ ವಿತರಿಸಲಾಗಿದೆ. ನಂತರ ಜುಲೈ.2025ರ ಮಾಹೆಯಿಂದ ಆಹಾರಧಾನ್ಯದಲ್ಲಿ ಅಕ್ಕಿ ಜೊತೆ ಜೋಳ ಸೇರಿಸಿ ಒಟ್ಟು 10 ಕೆ.ಜಿ. ಆಹಾರಧಾನ್ಯವನ್ನು ಸೆಪ್ಟೆಂಬರ್.2025ರ ಮಾಹೆಯವರೆಗೆ ನೀಡಲಾಗಿರುತ್ತದೆ. ಅಕ್ಟೋಬರ್.2025ರ ಮಾಹೆಯಿಂದ ಒಟ್ಟು 10 ಕೆ.ಜಿ. ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆಂದರು.
ಯುವನಿಧಿ ಯೋಜನೆಯಡಿಯಲ್ಲಿ ಪದವಿ ಪಡೆದ 15211 ಮತ್ತು ಡಿಪ್ಲೋಮಾ ಪಡೆದ 375 ಒಟ್ಟು 15586 ವಿದ್ಯಾರ್ಥಿಗಳಿಗೆ ಆಗಸ್ಟ್.2025 ರವರೆಗೆ 30.10 ಕೋಟಿ ಹಣ ಡಿಬಿಟಿ ಮೂಲಕ ಪವತಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ ಜಿಲ್ಲೆಯ ಪದವಿಧರರು ನೋಂದಾಯಿತರಾದವರಿಗೆ ಅವರಿಗೆ ಉದ್ಯೋಗ ಹೊಂದಲು ಸರಿಯಾದ ಕೌಶಲ್ಯ ತರಬೇತಿ, ಮಾರ್ಗದರ್ಶನ ನೀಡಬೇಕು. ಈಗ ಪದವಿ ಹಾಗೂ ಇತರೆ ಪರೀಕ್ಷೆಗಳು ಜರುಗಿದ್ದು ಹೊಸ ಫಲಾನುಭವಿಗಳು ಯುವನಿಧಿ ಯೋಜನೆ ಒಳಪಡಲು ಆಸಕ್ತರಾಗಿದ್ದಾರೆ. ಅಧಿಕಾರಿಗಳು ಜಿಲ್ಲಾ ತಾಲ್ಲೂಕು ಮಟ್ಟದಲ್ಲಿ ಯುವನಿಧಿ ಯೋಜನೆಯು ಕಾಲೇಜುಗಳಲ್ಲಿ ಕ್ಯಾಂಪ್ ಆಯೋಜಿಸಿ ಮಾಹಿತಿ ನೀಡಬೇಕೆಂದರು.
ಜಿಲ್ಲಾ ಪಂಚಾಯತ ಮುಖ್ಯ ಯೋಜನಾ ಅಧಿಕಾರಿಗಳಾದ ಕಿಶೋರ ದುಭೆ ಅವರು ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಲ್ಲಿ ಅವರ ಸಮಸ್ಯೆಗೆ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಉಪಾಧ್ಯಕ್ಷರು, ತಾಲ್ಲೂಕಾ ಮಟ್ಟದ ಅಧ್ಯಕ್ಷರು, ಸದಸ್ಯರುಗಳು ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಸಮರ್ಪಕವಾಗಿ ಪಡಿತರ ಅಂಗಡಿಯವರು ನೀಡುತ್ತಿಲ್ಲ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ಸು ಓಡಿಸುವ ಬಗ್ಗೆ ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತಂದರು.
ಈ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷರುಗಳಾದ ಲತಾ ಹಾರಕೂಡ, ಮಾರುತಿ ಬಂಗಾರೆ, ಮಹಬೂಬ ಖಾನ್, ಪೂಜಾ ಜಾರ್ಜ, ಉದಯಕುಮಾರ ವಾರದ, ತಾಲ್ಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
****


ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಬೀದರ
office: 08482-225370
PÀ£ÁðlPÀ ªÁvÉð

खबर कि अन्य लिंक :




  

टिप्पणी (0)

Sponsored / Featured Ads

Contact for ADS
8748888103/100
Sponsored by People of Universe