खबर / पोस्ट / जानकारी / विज्ञापन
दिनांक : 📅 1095740 - 11 - ज्ञान दिवस |
| 2026-01-22 |
👁️ 4104 |
“ಇಂಪ್ಲಾAಟ್ ಆಧಾರಿತ ದಂತ ಪಂಕ್ತಿ ಪುನರ್‌ಸ್ಥಾಪನೆ ಕುರಿತು ವಿಶೇಷ ಉಪನ್ಯಾಸ” ಡಾ. ಚೇತನ
ಎಸ್. ಬಿ. ಪಾಟೀಲ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರೋಸ್ತೊಡೊಂಟಿಕ್ಸ್ ವಿಭಾಗವು ದಿನಾಂಕ ೨೦ ಜನವರಿ ೨೦೨೬ ರಂದು ಸಂಸ್ಥೆಯ ಅನುಭವ ಮಂಟಪದಲ್ಲಿ ನಿರಂತರ ದಂತ ಶಿಕ್ಷಣ (ಅಆಇ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. “Immeಜiಚಿಣe ಈuಟಟ ಂಡಿಛಿh Imಠಿಟಚಿಟಿಣ ಖehಚಿbiಟiಣಚಿಣioಟಿ – ರೋಗನಿರ್ಣಯದಿಂದ ಅಂತಿಮ ವಿತರಣೆವರೆಗೆ” ಎಂಬ ವಿಷಯದ ಮೇಲೆ ಈ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ಮುಖ್ಯ ವಕ್ತಾರರಾಗಿ ಡಾ. ಚೇತನ ಭಾಗವಹಿಸಿದ್ದರು. ಅವರು ಫುಲ್ ಮೌತ್ ರಿಹ್ಯಾಬಿಲಿಟೇಶನ್ ಹಾಗೂ ಇಂಪ್ಲಾAಟಾಲಜಿಯಲ್ಲಿ ಖ್ಯಾತ ತಜ್ಞರಾಗಿದ್ದು, ತಮ್ಮ ವಿಶಾಲ ಅನುಭವ ಮತ್ತು ಜ್ಞಾನವನ್ನು ಉಪನ್ಯಾಸಗಳ ಮೂಲಕ ಹಂಚಿಕೊAಡರು. ಇಂಪ್ಲಾAಟ್ ಚಿಕಿತ್ಸೆಯ ಆಧುನಿಕ ಪರಿಕಲ್ಪನೆಗಳು, ರೋಗಿಯ ಸರಿಯಾದ ಆಯ್ಕೆ, ಚಿಕಿತ್ಸೆ ಯೋಜನೆ, ಶಸ್ತ್ರಚಿಕಿತ್ಸಾ ಹಂತಗಳು ಹಾಗೂ ಅಂತಿಮ ಪ್ರೊಸ್ಥೆಸಿಸ್ ವಿತರಣೆ ಕುರಿತು ವಿವರವಾದ ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ Pಣeಡಿಥಿgoiಜ Imಠಿಟಚಿಟಿಣs ಕುರಿತು ಹ್ಯಾಂಡ್ಸ್-ಆನ್ ತರಬೇತಿ ಆಯೋಜಿಸಲಾಗಿತ್ತು. ಇದರಿಂದ ಭಾಗವಹಿಸಿದವರಿಗೆ ನೇರ ಪ್ರಾಯೋಗಿಕ ಅನುಭವ ಪಡೆದುಕೊಳ್ಳುವ ಅವಕಾಶ ದೊರೆಯಿತು. ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ವಿವಿಧ ದಂತ ಕಾಲೇಜುಗಳಿಂದ ಬಂದ ಸುಮಾರು ೧೫೦ ಪ್ರತಿನಿಧಿಗಳು ಅದರಲ್ಲಿ ಪ್ರಾಧ್ಯಾಪಕರು ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಶೈಕ್ಷಣಿಕ ಗುಣಮಟ್ಟ, ವಿಷಯದ ಪ್ರಾಮುಖ್ಯತೆ ಮತ್ತು ಪ್ರಾಯೋಗಿಕ ತರಬೇತಿಯ ಕಾರಣದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಭಾಗವಹಿಸಿದವರು ಹಾಗೂ ಅತಿಥಿಗಳು ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಿದ ಎಲ್ಲಾ ದಂತ ವೈದ್ಯರುಗಳಿಗೆ ಎಸ್. ಬಿ. ಪಾಟೀಲ ದಂತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಈ ಸಂಧರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಡಾ. ಸೂರ್ಯಕಾಂತ ಜಿ. ಪಾಟೀಲ ಮತ್ತು ಪ್ರಾಂಶುಪಾಲರಾದ ಡಾ. ಚಂದ್ರಶೇಖರÀಗೌಡ ಪಾಟೀಲ, ಐಡಿಎ ಬೀದರ ವಿಭಾಗ ಅಧ್ಯಕ್ಷರಾದ ಡಾ. ಸವಿತಾ ಚಾಕೋತೆ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಶರತ್‌ಚಂದ್ರ ಪಾಟೀಲ, ಡಾ. ಸಿದ್ಧರ್ಥ, ಡಾ.ಸಿದ್ದನ ಗೌಡ, ಡಾ. ಪೂಜಾ ಮಡಕಿ, ಡಾ. ದೀಪಕ್, ಡಾ. ಪ್ರಸನ್ನಕುಮಾರಿ, ಡಾ. ಸುನಂದಾ ಗದಲೇ, ಡಾ. ಲುಬಾನ್ ನಾಜಿನ್, ಡಾ. ಎಸ್. ಎಸ್. ಜಾಮಶೆಟ್ಟಿ ಆಡಳಿತಧಿಕಾರಿ ಸುರೇಶ ಬಸವಣ್ಣಪ್ಪಾ ಶೀಗ್ಲಿ ಕಾಲೇಜಿನ ಇನ್ನಿತರು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
From:
Sangmesh Nelge S/o Pandith Nelge
17-4-243 Nelge Nivas Mahesh Nagar
Bidar -585403
Cell No 9844932076
खबर कि अन्य लिंक :